ರಾಜ್ಯದ ಜನತೆಗೆ ಮತ್ತೊಂದು ಬಿಗ್ ಶಾಕ್ ಕಾದಿದೆ ಅ. 1 ರಿಂದ ನಂದಿನಿ ಹಾಲಿನ ದರದಲ್ಲಿ ಒಂದು ರೂ. ಹೆಚ್ಚಳ ಮಾಡವುದಾಗಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ತೀರ್ಮಾನ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಸಭೆಯಲ್ಲಿ ಎಲ್ಲಾ ರೀತಿಯ ಪಾಕೆಟ್ ಹಾಲಿನ ಮೇಲೆ ಒಂದು ರೂ. ಹೆಚ್ಚಿಸುವುದಾಗಿ ತೀರ್ಮಾನ ಕೈಗೊಳ್ಳಲಾಗಿದೆ.
ಬಮೂಲ್ ನ ಅಧ್ಯಕ್ಷ ಬಿ.ಜೆ ಅಂಜನಪ್ಪ ನೇತೃತ್ವದಲ್ಲಿ ಬೆಂಗಳೂರಿನ ಡೈರಿಯಲ್ಲಿ ಸಭೆ ನಡೆಯುತ್ತಿದ್ದು, ಹಾಲಿನ ಪುಡಿ ಈಗಾಗಲೇ 3500 ಟನ್ ಗಳಷ್ಟು ಅಧಿಕವಾಗಿದೆ. ಯಾವುದೇ ಕಾರಣಕ್ಕೂ ನಾವು ಹಾಲಿನ ಪುಡಿಯನ್ನು ಸದ್ಯಕ್ಕೆ ಉತ್ಪಾದಿಸುವುದಿಲ್ಲ. ಅದರಿಂದ ಸಂಸ್ಥೆಗೆ ನಷ್ಟವೇ ಹೊರತು ಲಾಭಂಶ ಇಲ್ಲ ಎಂದು ಅಂಜನಪ್ಪ ಮಾಹಿತಿ ನೀಡಿದ್ದಾರೆ.


Comments
Post a Comment